Thursday, December 11, 2025
HomePopularಉಸಿರಿರುವವರೆಗೆ ಸಮಾಜಕ್ಕಾಗಿ ದುಡಿಯುತ್ತೇನೆ - ಮಹಾದೇವ ಬಿರಾದಾರ

ಉಸಿರಿರುವವರೆಗೆ ಸಮಾಜಕ್ಕಾಗಿ ದುಡಿಯುತ್ತೇನೆ – ಮಹಾದೇವ ಬಿರಾದಾರ

ಹೈದ್ರಾಬಾದನಲ್ಲಿ 104 ಕ್ರೈಸ್ತ್ ಕುಟುಂಬಗಳಿಂದ ಅಭಿನಂದನಾ ಸಮಾರಂಭ

ಉಸಿರಿರುವವರೆಗೆ ಸಮಾಜಕ್ಕಾಗಿ ದುಡಿಯುತ್ತೇನೆ – ಮಹಾದೇವ ಬಿರಾದಾರ

ಬೀದರ್ : ತಾವು ಅಲಿಯಂಬರ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿಸುತ್ತಿರುವ ಅವಧಿಯಲ್ಲಿ ಕ್ಷೇತ್ರದ ವ್ಯಾಪ್ತಿಯ ಮಮದಾಪೂರ, ವಿಳಸಪುರ, ರಾಜನಾಳ ಮತ್ತು ಅಲಿಯಂಬರ ಗ್ರಾಮಗಳ ಸರ್ವ ಸಮಾಜದವರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದಕ್ಷತೆಯಿಂದ, ಕರ್ತವ್ಯನಿಷ್ಠೆಯಿಂದ ದುಡಿದಿರುತ್ತೇನೆ. ಎಲ್ಲರೂ ನನ್ನವರು ಎಂಬ ಸಹೋದರತ್ವ ಭಾವನೆಯಿಂದ ಶ್ರಮಿಸುತ್ತಿರುವೆ. ಕೊನೆಯ ಉಸಿರಿನವರೆಗೂ ಜನ ಸೇವೆಗೈಯುವೆ ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯುವಕರ ಕಣ್ಮಣಿ, ಸಮಾಜ ಚಿಂತಕ, ಸೇವಕ, ಮಹಾದೇವ ಬಿರಾದಾರ ಅವರು ನುಡಿದರು.

ಅವರು ತೆಲಂಗಾಣ ರಾಜ್ಯದ ಹೈದ್ರಾಬಾದನ ಹಫಿಜಪೇಟ್ ಬಡಾವಣೆಯಲ್ಲಿನ ಐಡಿಯಲ್ ಬ್ಯಾಂಕ್ವೇಟ್ ಹಾಲ್‌ನಲ್ಲಿ ಅಲಿಯಂಬರ ಗ್ರಾಮದ ಕ್ರೈಸ್ತ ಸಮುದಾಯ ಏರ್ಪಡಿಸಿದ ಅಭಿನಂದನಾ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡುತಿದ್ದರು. ಅಲಿಯಂಬರ ಗ್ರಾಮದ ಕ್ರೆöÊಸ್ತ ಬಡಾವನೆಯ ಚರ್ಚ್ ಬಳಿ ಹೈಮಾಸ್ಟ್ ಲೈಟ್, ಸಿಸಿ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿಗಳು, ರುದ್ರಭೂಮಿ ಸೇರಿದಂತೆ ಮೂಲಭುತ ಸೌಕರ್ಯಗಳು ಮಾಡಿಕೊಟ್ಟಿರುವೆ. ರಾಜನಾಳ, ಮಮದಾಪೂರ, ವಿಲಾಸಪುರ ಮತ್ತು ಹಳೆಂಬರನಲ್ಲಿ, ಮತ್ತು ಹೈಮಾಸ್ಟ್ ಲೈಟ್, ದಾರಿದೀಪಗಳ ವ್ಯವಸ್ಥೆ, ಸೋಲಾರ ಹೈಮಾಸ್ಟ್ ಲೈಟಗಳು, ಚರಂಡಿ, ಒಳಚರಂಡಿ, ನೀರಿನ ವ್ಯವಸ್ಥೆ ಮಾಡಿಸಿ, ಸರ್ಕಾರಿ ಶಾಲೆಗಳಲ್ಲಿಯೂ ಮುಲಭೂತ ಸೌಕರ್ಯಗಳನ್ನು ಒದಗಿಸಿರುವೆ. ಗ್ರಾಮದ ಮುಖ್ಯರಸ್ತೆ ಮಾಡಿಸಿರುವೆ. ಸೀಮಿ ನಾಗಣ್ಣ ದೇವಸ್ಥಾನ ಬಳಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವೆ ಎಂದ ಅವರು ಹೈದ್ರಾಬಾದನಲ್ಲಿರುವ ಕ್ರೆöÊಸ್ತ ಸಮುದಾಯದ 104 ಕುಟುಂಬಗಳ ಸದಸ್ಯರುಗಳು ತಮ್ಮನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸಿ ನನ್ನ ಹೊಣೆಗಾರಿಕೆ ಹೆಚ್ಚಿಸಿದ್ದಿರಿ ಎಂದ ಅವರು ನಿಮ್ಮ ಅಭಿಮಾನಕ್ಕೆ ನಾನು ಹೃದಯಪೂರ್ವಕವಾಗಿ ಕೃತಜ್ಷತೆ ಸಲ್ಲಿಸುತ್ತೇನೆ. ತಮ್ಮ ಹಿತವನ್ನು ಕಾಪಾಡಲು ದಿನದ 24 ತಾಸುಗಳ ಕಾಲ ಸದಾ ಸೇವೆಯಲ್ಲಿ ಸಿದ್ಧನಾಗಿರುವೆ ಎಂದರು.

ಎನ್‌ಎಸ್‌ಎಸ್‌ಕೆ ನಿರ್ದೇಶಕ ಸಂಗಮೇಶ ಪಾಟೀಲ್ ಹಳೆಂಬರ ಮಾತನಾಡಿ, ತಮ್ಮ ಅವಧಿಯಲ್ಲಿಯೂ ಜನರ ಅಭಿವೃದ್ಧಿಗೋಸ್ಕರ ಸಾಕಷ್ಟು ಕೆಲಸ-ಕಾರ್ಯಗಳನ್ನು ಮಾಡಿರುತ್ತೇವೆ ಎಂದರು. ಚಂದ್ರಪ್ಪ ಬಿರಾದಾರ ಅವರು ಮಾತನಾಡಿ, ಕ್ರೆöÊಸ್ತ ಸಮುದಾಯ ನಂಬಿಗಸ್ತ ಸಮಾಜವಾಗಿದೆ. ಮಾತು ಕೊಟ್ಟಂತೆ ನಡೆದುಕೊಳ್ಳುವವರಾಗಿದ್ದಾರೆ ಎಂದರು. ಯುವ ತರುಣ ಚಮದ್ರಕಂತ ಹಳ್ಳಿಖೇಡಕರ್ ಮಾತನಾಡಿ, ಮಹಾದೇವ ಬಿರಾದಾರ ಅವರು ಎಲ್ಲರೂ ನನ್ನವರೆಂದು ಪ್ರಗತಿಯ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದಾರೆ.ಮಾ

ನವೀಯತೆಯಯ ಗುಣವುಳ್ಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿ ಹೊಂದುವಂತೆ ಶ್ರಮಿಸುವ ವ್ಯಕ್ತಿಯಾಗಿದ್ದಾರೆ ಎಂದು ಕೊಂಡಾಡಿದರು.

ವೇದಿಕೆಯ ಮೇಲಿದ್ದ ಅಲಿಯಂಬರ ಮೂಲದ ಕ್ರೆöÊಸ್ತ ಸಮುದಾಯದ ಮುಖಂಡ, ಪಾಸ್ಟರ್ ಬಿ.ಎನ್. ಮನೋಹರ ಬಾವಿದೊಡ್ಡಿ ಮಾತನಾಡಿ, ಮಹಾದೇವ ಬಿರಾದಾರ ಅವರು ತಮ್ಮ ಸಮಾಜಕ್ಕಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ.

ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಯಾವುದೇ ರೀತಿಯ ಹೆಜ್ಜೆಯಿಟ್ಟರೂ ತಮ್ಮ ಸಮಾಜದ ಹೈದ್ರಾಬಾದಿನ ಹಫಿಜಪೇಟನಲ್ಲಿರುವ 104 ಕುಟುಂಬಗಳು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತವೆ ಎಂದರು. ಬಿ.ನೆ. ವೈಜಿನಾಥ, ಡಿ. ಶಿರೋಮಣಿ, ಕಾಶಿನಾಥ, ಶಂಕರ, ಆರ್, ಶಂಕರ ಕೆ. ಶಿವರಾಜ ದೊಡ್ಮನಿ, ಬಾಬುರಾವ, ಧನರಾಜ ಪಾಸ್ಟರ್, ಡಿ. ವಿಲ್ಸನ್, ಬಿ. ಎನ್. ಸ್ಯಾಮಸಂನ್, ಶಂತಕುಮಾರ, ಆರ್. ಶಿವರಾಜ, ಕೆ. ಶಂಕರ, ಕೆ. ದಾಸ್ ಪಾಸ್ಟರ್ ಅವರು ಸ್ತೋತ್ರ, ಪ್ರಾರ್ಥನೆ ಮಾಡಿದರು. ವಿಜಯಕುಮಾರ ಭುರಗುಂಡೆ, ಬಸವರಾಜ ಭುರಗುಂಡೆ, ಸುನೀಲ ಸೆಟಗೊಂಡೆ, ಗಣಪತಿ ಸಕ್ರೆಪ್ಪನೋರ್, ವಿರೇಶ ಬಿರಾದಾರ, ನಾಗಶೆಟ್ಟಿ ಧರಮಪುರ, ಅವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕ್ರೆöÊಸ್ತ ಸಮುದಾಯದವರ ಜೊತೆ ºಳೆೆಂಬರ ಗ್ರಾಮದ ನೀಲಕಂಠ ಸ್ವಾಮಿ, ಮಲ್ಲಿಕಾರ್ಜುನ ಪೋಲಿಸ್ ಪಾಟೀಲ, ಬಸವರಾಜ ಮಆಲಿಪಾಟೀಲ, ರಮೆಶ ಮಾಲಿಪಾಟೀಲ, ರೇವಣಯ್ಯ ಸ್ವಾಮಿ, ಪುಂಡಲಿಕ ರಾಯಗೊಂಡೆ, ಚಂದ್ರಶೆಖರ ಗಾದಗಿ, ವಿಜಯಕುಮಾರ ಔರಾದೆ, ಮೈಕತ ಅಲಿ ಮಚಕೂರಿ, ವೀರಶೆಟ್ಟಿ ಮನ್ನಾಳೆ, ಅಶೋಕ ಸಂತಪೂರೆ, ಗ್ರಾಮ ಪಂಚಾಯತ ಸದಸ್ಯರಾದ ಉಮೇಶ ಮುಗನೂರೆ, ಡಾ. ಹುಲೆಪ್ಪ ಘೊಡಂಪಳ್ಳಿ, ಹುಲೆಪ್ಪ ಮೈಲೂರೆ, ಜಗನ್ನಾಥ ಪಾಪಡೆ, ಸೇರಿದಂತೆ ಸುಮಾರು 200 ಜನರು ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Nagem Uddin on Smartwatch Series 3
Md Rana Ahmad on Smartwatch Series 3